Monday, June 18, 2012

ಬೆಂಗಳೂರಿನ ಪ್ರೇಕ್ಷಣಿಯ ಸ್ಥಳಗಳು



ಇದು ಸದಾಶಿವನಗರದ ಸ್ಯಾಂಕಿ  ಟ್ಯಾಂಕ್  ಉದ್ಯಾನವನದ ಒಂದು ರಮಣೀಯ ನೋಟ.








Thursday, November 19, 2009

ಸಿ.ಅಶ್ವಥ್ ಡೈನಮ್ಯಾಟಿಕ್ ಸಂಸ್ಥೆಯಲ್ಲಿ





















ನಮ್ಮ ಡೈನಮ್ಯಾಟಿಕ್ ಟೆಕ್ನಲಾಜಿಸ್ ಸಂಸ್ಥೆಯ ಕನ್ನಡ ಕಲಾ ಸಂಘದ ವತಿಯಿಂದ ದಿನಾಂಕ ೦೮/೧೧/೦೯ ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯ ಅದ್ಯಕ್ಷರಾದ ಶ್ರೀಉದಯಂತ್ ಮಲ್ಹೋತ್ರರವರ ಅದ್ಯಕ್ಷತೆಯಲ್ಲಿ,ಸಂಸ್ಥೆಯ ವ್ಯವಸ್ತಾಪಕ ನಿರ್ದೇಶಕರಾದ ಶ್ರೀ ಪಿ.ಎಸ್.ರಮೇಶ್ ಮಾರ್ಗದರ್ಶನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡ ಖ್ಯಾತ ಸಾಹಿತಿ,ಕವಿ,ಹಾಗೂ ಬರಹಗಾರರಾದ ಪ್ರೊ: ಶ್ರೀ ದೊಡ್ಡರಂಗೇಗೌಡರು,ಖ್ಯಾತ ಸಂಗೀತ ಸಂಯೋಜಕರು ಹಾಗೂ ಗಾಯಕರೂ ಆದ ಪ್ರೀತಿಯ ಶ್ರೀ ಡಾ|| ಸಿ.ಅಶ್ವಥ್ ಮತ್ತು ಯುವ ನಾಯಕರಾದ ಶ್ರೀ ದಿನೇಶ್ ಗುಂಡೂರಾವ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯ ಆಡಳಿತವರ್ಗ ಹಾಗೂ ಕನ್ನಡ ಕಲಾ ಸಂಘದಿಂದ ಆಯೋಜಿಸಲಾಗಿತ್ತು. ಸಂದರ್ಭದಲ್ಲಿ ಸನ್ಮಾನಿತರಿಂದ ಭಾಷೆ,ನಾಡು,ಕನ್ನಡಿಗರ ಸ್ವಾಭಿಮಾನ ಮತ್ತು ಕನ್ನಡಿಗರ ಹೃದಯ ವೈಶಾಲ್ಯದ ಬಗ್ಗೆ ಸವಿನುಡಿಗಳನ್ನು ನುಡಿದು ನೆರೆದಿದ್ದ ಜನ ಸಮೂಹಕ್ಕೆ ಹಿತವಚನ ನೀಡಿದರು.

ನಂತರ ನಡೆದ ಮನರಂಜನಾಕಾರ್ಯಕ್ರಮದಲ್ಲಿ ಡಾ|| ಸಿ. ಅಶ್ವಥ್ ಮತ್ತು ತಂಡದವರುಸುಗಮ ಸಂಗೀತ ಗಾಯನದ ಮೂಲಕ ಜನರ ಮನ ರಂಜಿಸಿದರು. ಸುಸಂಧರ್ಭದಲ್ಲಿ ನಮ್ಮ ಸಂಸ್ಥೆಯ ಆಡಳಿತ ಅಧಿಕಾರಿಗಳು ಕಾರ್ಮಿಕರು ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.